ಬಿಜೆಪಿ

ಜೀವನಚರಿತ್ರೆ

ಡಾ.ಅಶ್ವಥ್ ನಾರಾಯಣ್ ಸಿ.ಎನ್.

ರಾಜ್ಯದ ಉನ್ನತಿಗೆ ಯುವ ಸಬಲೀಕರಣ, ಮಹಿಳಾ ಸಶಕ್ತಿಕರಣ , ಅಂತ್ಯೋದಯ ಬಹುಮುಖ್ಯ ಅಂಗವಾಗಿದೆ ಎಂದು ನಂಬಿ ಸಾಮಾಜಿಕ ಜೀವನಕ್ಕೆ ಕಾಲಿಟ್ಟಿದ್ದೇನೆ.

ಮುಂದಿನ ದಿನಗಳಲ್ಲಿ ನನ್ನ ಪ್ರಕಾರ,ನಮ್ಮ ರಾಜ್ಯದ ಯುವಕರು ರಾಜ್ಯವನ್ನು ಉನ್ನತ ಮಟ್ಟದ ಪ್ರಗತಿಯತ್ತ ಏರಿಸಲು, ಮುಂದಿನ ನೀತಿಯನ್ನು ನೀಡುತ್ತಾರೆ.

- ಡಾ.ಅಶ್ವಥ್ ನಾರಾಯಣ್ ಸಿ.ಎನ್.

ಇತಿಹಾಸ

ನಡೆದು ಬಂದ ಹಾದಿ

ಜೀವನಚರಿತ್ರೆ

minister oath taking 3 -
Eajlg5lUMAMP4Cj -

ಡಾ.  ಆಶ್ವಥ್ ನಾರಾಯಣ್‍ ಸಿ.ಎನ್. ರವರು ಒಬ್ಬ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ 10ನೆಯ ಉಪಮುಖ್ಯಮಂತ್ರಿಗಳು ಹಾಗೂ ಪ್ರಸ್ತುತವಾಗಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವರು, ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ ಸಚಿವರು. ಇವರು ಕರ್ನಾಟಕದ ವಿಧಾನಸಭಾ ಸದಸ್ಯರಾಗಿದ್ದು, ಕರ್ನಾಟಕ ರಾಜ್ಯದ ಬೆಂಗಳೂರು ನಗರದ ಮಲ್ಲೇಶ್ವರಂ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಬಹುಮುಖೀ ವ್ಯಕ್ತಿತ್ವ ಮತ್ತು ತಂತ್ರಜ್ಞಾನದಲ್ಲಿ ದೃಢ ನಂಬಿಕೆಯುಳ್ಳ ಡಾ|| ಅಶ್ವಥ್ ನಾರಾಯಣ್‍ರವರು ಒಬ್ಬ ವಿದ್ಯಾಪರಿಣತರು, ಆರೋಗ್ಯ ಉದ್ಯಮಿಗಳು ಮತ್ತು ಲೋಕೋಪಕಾರಿಯಾಗಿದ್ದಾರೆ.

ಡಾ|| ಅಶ್ವಥ್ ನಾರಾಯಣ್‍ ರವರು ಅಲಂಕರಿಸಿದ ಹುದ್ದೆಗಳಲ್ಲಿ ಈ ಕೆಳಗಿನವು ಒಳಗೊಂಡಿವೆ-

ಭಾರತೀಯ ಜನತಾ ಪಕ್ಷದ ವೈದ್ಯರ ಸಂವಿಭಾಗದ ಸಂಚಾಲಕರು ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‍ನ ಸಂಸ್ಥಾಪಕ ಅಧ್ಯಕ್ಷರು. ಇವರು ಬೆಂಗಳೂರು ಜಿಲ್ಲೆಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರು, ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಉದ್ಯೋಗಿಗಳ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‍ನ ಉದ್ಯೋಗಿಗಳ ಎ&ಬಿ, ಸಿ&ಡಿ ಪದವೃಂದಗಳಿಗಾಗಿ ಪರಿನಿಯಮಗಳನ್ನು ರಚಿಸುವ ಸಮಿತಿಯ ಅಧ್ಯಕ್ಷರೂ ಕೂಡ ಆಗಿದ್ದರು.

ಡಾ|| ಅಶ್ವಥ್‍ನಾರಾಯಣ್‍ರವರು ಆರೋಗ್ಯ ವಿಮಾ ಯೋಜನೆಗಳು, ವಿಧವೆಯರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗಾಗಿ ಪಿಂಚಣಿ ಯೋಜನೆಗಳು, ಹಿರಿಯ ನಾಗರೀಕರಿಗಾಗಿ ಡೇ ಕೇರ್ ಕೇಂದ್ರಗಳು ಮತ್ತು ಪ್ರತಿಯೊಂದು ವಾರ್ಡಿನಲ್ಲಿ ಸೇವಾಕೇಂದ್ರಗಳ ಪರಿಚಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಜೊತೆಗೆ ಹಸಿರು ಸಂತೆ, ಶೂನ್ಯ ಕಸ, ತ್ಯಾಜ್ಯ ಸಂಸ್ಕರಣೆ, ಹಳೆಯ ಸ್ಥಾಪನೆಗಳ ನವೀಕರಣ, ಉದ್ಯಾನಗಳು, ಜಿಮ್ ಹಾಗೂ ಏರೋಬಿಕ್ಸ್ ಕೇಂದ್ರಗಳ ಅಭಿವೃದ್ಧಿಯಲ್ಲಿಯೂ ಇವರ ಕೈ ಇದೆ.

ಆಗಸ್ಟ್ 20, 2019ರಂದು ಮುಖ್ಯ ಮಂತ್ರಿ ಬಿ.ಎಸ್.ಎಡಿಯೂರಪ್ಪನವರ ಮುಂದಾಳುತ್ವದ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಇವರು ಸಂಪುಟ ಸಚಿವರಾಗಿ ಆಯ್ಕೆಯಾದರು.

ಕುಟುಂಬ ಮತ್ತು ಬಾಲ್ಯ

WhatsApp Image 2020 06 29 at 5.30.48 PM -

ಫೆಬ್ರವರಿ 2, 1969ರಂದು ಜನಿಸಿದ ಸಿ. ಎನ್. ಆಶ್ವಥ್‍ನಾರಾಯಣ್‍ರವರು ಶ್ರೀ. ಟಿ.ಕೆ. ನಾರಾಯಣಪ್ಪ ಮತ್ತು ಶ್ರೀಮತಿ ವಿ.ಎಲ್. ಪದ್ಮಮ್ಮನವರ ಕಿರಿಯ ಪುತ್ರ. ಟಿ.ಕೆ. ನಾರಾಯಣಪ್ಪನವರು ಶಿಕ್ಷಕರಾಗಿದ್ದು, ದೈಹಿಕ ಶಿಕ್ಷಣದ ಉಪ ಅಧೀಕ್ಷಕರಾಗಿ ನಿವೃತ್ತಿ ಹೊಂದಿದ್ದರು. ಆಶ್ವಥ್‍ನಾರಾಯಣ್‍ರವರಿಗೆ ಮೂವರು ಸಹೋದರರಿದ್ದಾರೆ. ಇವರು ಸಮಾಜ ಕಾರ್ಯಗಳಲ್ಲಿ ಉನ್ನತ ಪದವೀಧರೆಯಾಗಿರುವ (ಮಾಸ್ಟರ್ ಆಫ್ ಸೋಶ್ಯಲ್ ವರ್ಕ್) ಶ್ರೀಮತಿ ಶ್ರೃತಿಯವರನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಪುತ್ರ, ಅಮೋಘ್ ಮತ್ತು ಒಬ್ಬ ಪುತ್ರಿ ಆಕಾಂಕ್ಷಾ.

ಆರಂಭಿಕ ಜೀವನ ಮತ್ತು ವೃತ್ತಿ

WhatsApp Image 2020 06 29 at 3.06.19 PM -

ಡಾ|| ಅಶ್ವಥ್ ನಾಯಾಯಣ್‍ರವರು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಿಂದ ಎಂ.ಬಿ.ಬಿ.ಎಸ್ ಪದವಿ ಪಡೆದರು. ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ತಮ್ಮ ಶಾಲಾ ಜೀವನವನ್ನು ಮುಗಿಸಿದ ನಂತರ ಇವರು ತಮ್ಮ ವೈದ್ಯಕೀಯ ಪದವಿಯನ್ನು ಗಳಿಸಲು ಮಾಣಿಪಾಲ್‍ನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿಗೆ ತೆರಳಿದರು. ಇಲ್ಲಿ ಅವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು ಮತ್ತು ಓದು ಮುಗಿದ ನಂತರ ಕಿರಿಯ ವೈದ್ಯರ ಸಂಘದ ಅಧ್ಯಕ್ಷರೂ ಸಹ ಆದರು. ವಿದ್ಯಾರ್ಥಿ ಸಂಘದ ನಾಯಕರಾಗಿ ಕಾಲೇಜು ಮುಗಿಸಿ, ನಂತರ ಕಿರಿಯ ವೈದ್ಯರ ಸಂಘದ ಅಧ್ಯಕ್ಷರಾದ ಬಳಿಕ ಇವರು ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಚುನಾಯಿತರಾದರು.

ಇವರು ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಸುಶ್ರುತ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‍ಗಳನ್ನು ಪ್ರಾರಂಭಿಸಿದರು, ಇವು ವೈದ್ಯಕೀಯ ಸಹಾಯಕ (ಪ್ಯಾರಾಮೆಡಿಕ್), ಮ್ಯಾನೇಜ್ಮೆಂಟ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಯುರ್ವೇದ ವೈದ್ಯಕೀಯ ವಿಜ್ಞಾನಗಳಲ್ಲಿ ವಿವಿಧ ಕೋರ್ಸ್‍ಗಳನ್ನು ಒದಗಿಸುವ ಶಿಕ್ಷಣ ಸಂಸ್ಥೆಗಳ ಸಮೂಹವನ್ನು ನಡೆಸುತ್ತಿವೆ.

ರಾಜಕೀಯ ಜೀವನ

WhatsApp Image 2020 07 01 at 11.46.20 AM -
WhatsApp Image 2020 07 01 at 11.35.54 AM -
EJo6 a2UwAQwwEc -

ಡಾ|| ಸಿ.ಎನ್. ಆಶ್ವಥ್‍ನಾರಾಯಣ್‍ರವರು 2004ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರುವ ಮೂಲಕ ರಾಜಕೀಯ ಮುಖ್ಯವಾಹಿನಿಗೆ ಕಾಲಿಟ್ಟರು ಮತ್ತು ಮಲ್ಲೇಶ್ವರಂನಿಂದ (ವಿಧಾನ ಸಭಾ ಕ್ಷೇತ್ರ) ಚುನಾವಣೆಗೆ ನಿಂತು ಆಗಿನ ಶಾಸಕರಾದ ಎಂ.ಆರ್.ಸೀತಾರಾಮ್ ವಿರುದ್ಧ ಚುನಾವಣೆ ಸೋತರು.

2008ರಲ್ಲಿ ಪುನಃ ಅದೇ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಅಶ್ವಥ್‍ನಾರಾಯಣ್‍ರವರು, ಎರಡು ಬಾರಿ ಶಾಸಕರಾಗಿದ್ದ ಎಂ.ಆರ್. ಸೀತಾರಾಮ್‍ರವರನ್ನು ದೊಡ್ಡ ಅಂತರದೊಂದಿಗೆ ಸೋಲಿಸಿ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜಯಶಾಲಿಯಾದರು.

ಇವರನ್ನು ಬೆಂಗಳೂರು ಜಿಲ್ಲೆಯ ಬಿಜೆಪಿಯ ಉಪಾಧ್ಯಕ್ಷರ ಮಟ್ಟಕ್ಕೇರಿಸಲಾಯಿತು. ಏಪ್ರಿಲ್ 2009ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯು ದೊಡ್ಡ ಅಂತರದೊಂದಿಗೆ ಗೆದ್ದರು ಮತ್ತು 2010ರ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ 7ರಲ್ಲಿ 6 ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯ ಪಡೆದರು.

ತಮ್ಮ ರಾಜಕೀಯ ವೃತ್ತಿಜೀವನಲ್ಲಿ ಜನ ಪ್ರತಿನಿಧಿಯಾಗಿ ಇವರು ಕೈಗೊಂಡ ಕೆಲವು ಉಪಕ್ರಮಗಳು ಹೀಗಿವೆ:

ಮಲ್ಲೇಶ್ವರಂನಲ್ಲಿರುವ ‘ಧೋಬಿ ಘಾಟ್’ ನಗರದಲ್ಲೇ ಅಲ್ಲ, ರಾಜ್ಯದಲ್ಲಿಯೂ ಕೂಡ ಮೊದಲನೆಯದಾದ ಆಧುನೀಕೃತ ಧೋಬಿ ಘಾಟ್ ಎಂಬ ಮಾನ್ಯತೆ ಗಳಿಸಿದೆ. 400ಕ್ಕೂ ಹೆಚ್ಚು ಕುಟುಂಬಗಳ ಜೀವನೋಪಾಯಕ್ಕೆ ಆಸರೆಯಾಗಿರುವ ಡಾ|| ಅಶ್ವಥ್‍ನಾರಾಯಣ್‍ರವರ ಈ ಉಪಕ್ರಮವು ಈಗ ‘ರಾಷ್ಟ್ರೀಯ ಮಾದರಿ’ ಆಗಿದೆ.

ಮಲ್ಲೇಶ್ವರಂನ ಸರ್ಕಾರಿ ಶಾಲೆಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ‘ಮಾಂಟೆಸರಿ’ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಮಕ್ಕಳಿಗೆ ಉತ್ತಮ ಕಲಿಕೆ ಅನುಭವವನ್ನು ಒದಗಿಸುತ್ತವೆ ಮತ್ತು ಇವು ಖಾಸಗಿ ಪ್ರೀಸ್ಕೂಲ್ ಕೇಂದ್ರಗಳಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ನಾಗರೀಕರು ತಮ್ಮ ಸಮಸ್ಯೆಗಳ ಬಗ್ಗೆ ವರದಿ ಮಾಡಲು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳೊಳಗೆ ಹೊಂದಾಣಿಕೆ ಮತ್ತು ಪಾರದರ್ಶಕತೆ ಬೆಳೆಸುವ ಸಲುವಾಗಿ ‘ಮಲ್ಲೇಶ್ವರಂ ಸಹಾಯ’ ಎಂಬ ನಾಗರೀಕ–ಕೇಂದ್ರಿತ ದೂರು ಪರಿಹಾರ ವೇದಿಕೆಯನ್ನು (ಪೋರ್ಟಲ್ ಮತ್ತು ಆ್ಯಪ್) ನಿರ್ಮಿಸಲಾಗಿದೆ.

ಹುದ್ದೆಗಳು ಮತ್ತು ಪ್ರಾತಿನಿಧ್ಯಗಳು

WhatsApp Image 2020 07 01 at 11.22.06 AM -
  •       ಅಧ್ಯಕ್ಷರು, ಸಂಸ್ಕಾರ ಭಾರತಿ, ಮಲ್ಲೇಶ್ವರಂ
  •       ಉಪಾಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು
  •       ಸಂಚಾಲಕರು, ವೈದ್ಯರ ಸಂವಿಭಾಗ, ಬಿಜೆಪಿ, ಕರ್ನಾಟಕ
  •       ಕಾರ್ಯಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು, ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್, ಬೆಂಗಳೂರು
  •       ಆಡಳಿತ ಮಂಡಳಿ ಸದಸ್ಯರು, ಬೆಂಗಳೂರು ವಿಶ್ವವಿದ್ಯಾಲಯ

ಇತರ ಹುದ್ದೆಗಳು

  •       2000ದ ಇಸವಿಯಿಂದ ಬೆಂಗಳೂರಿನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಉದ್ಯೋಗಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರು
  •       ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‍ನ ಉದ್ಯೋಗಿಗಳ ಎ&ಬಿ, ಸಿ&ಡಿ ಪದವೃಂದಗಳಿಗಾಗಿ ಪರಿನಿಯಮಗಳನ್ನು ರಚಿಸುವ ಸಮಿತಿಯ ಅಧ್ಯಕ್ಷರು, 2000-2002.

Medical Health Care Centers

Together we can build a stronger economy, healthier families and a more

Economical Stability

Economical can build a stronger economy, healthier families and a more...

Prioritizing the most vulnerable

President announced plans to end solitary confinement for juvenile offenders...

Educational Environment

Education is the most powerful weapon which you can use to change...

Campaign is power

0

Total Volunteer

0

Campaigns

0

Vote Papers

0

Coverage Area