


ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಅನ್ನು ಅಧಿಕೃತವಾಗಿ 19 ಅಕ್ಟೋಬರ್ 2012 ರಂದು ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಪ್ರಾರಂಭಿಸಲಾಗಿದೆ.
ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್, ಫಿಟ್ನೆಸ್ ಮತ್ತು ಕ್ರೀಡೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸಂಘವಾಗಿದೆ. ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಸಾಮಾಜಿಕವಾಗಿ ಕಾಳಜಿ ವಹಿಸುವ ಕ್ರೀಡಾ ಸಂಸ್ಥೆಯಾಗಿದ್ದು, ತಳಮಟ್ಟದಿಂದ ವ್ಯತ್ಯಾಸವನ್ನು ತರಲು ಪ್ರಯತ್ನಿಸುತ್ತಿದೆ.
ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಮುನ್ನೋಟ
ನಮ್ಮ ಸಮುದಾಯ, ರಾಜ್ಯ ಮತ್ತು ದೇಶಕ್ಕೆ ಪ್ರಶಸ್ತಿ ತಂದ ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸಿ
ಜಾತಿ ಮತ ಧಾರ್ಮ ಲೆಕ್ಕಿಸದೆ ಎಲ್ಲ ಸಮುದಾಯದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು
ಜನರ ಬದುಕಿನಲ್ಲಿ ಕ್ರೀಡೆಗಳನ್ನು ಅಳವಡಿಸುವ ಮೂಲಕ ಅವರಲ್ಲಿ ಆರೋಗ್ಯಕರ ಜೀವನಶೈಲಿ ಬೆಳೆಸುವುದು.
ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗುವುದು.
ಕ್ರೀಡೆಯನ್ನು ಬಳಸಿಕೊಂಡು ಆರೋಗ್ಯಕರ ಸಮುದಾಯವನ್ನು ಕಟ್ಟುವುದು.
ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಇನ್ನು ಉತ್ತಮಗೊಳಿಸುವುದು .
ಕ್ರೀಡಾ ಸಂಬಂಧಿತ ನೀತಿ ವಿಷಯಗಳಲ್ಲಿ ಸರ್ಕಾರವನ್ನು ಪ್ರಭಾವಿಸುವುದು. ಮಾಹಿತಿಯ ಕೊರತೆ, ಸರಿಯಾದ ತರಬೇತಿ, ಮೂಲಸೌಕರ್ಯ, ಆಹಾರ ಪೋಷಣೆ ಇತ್ಯಾದಿಗಳಿಂದಾಗಿ ಅನಾನುಕೂಲವಾಗದಂತೆ ನೋಡಿಕೊಳ್ಳುವುದು.