dr cna foundation logo (2)
DSC 0699 1 min min 1 -
EQwGx1gVAAA3KBK -
ಸಮಾಜದ ಉನ್ನತಿಗಾಗಿ ನಮ್ಮ ವ್ಯಾಪ್ತಿ ಮತ್ತು ಪ್ರಭಾವವನ್ನು ಹೆಚ್ಚಿಸುವುದಕ್ಕೆ ನಾವು ತಾಂತ್ರಿಕ ಪರಿಣತಿಯೊಂದಿಗೆ ಸಂಸ್ಥೆಗಳು ಮತ್ತು ಸಮುದಾಯದ ಮುಖಂಡರೊಂದಿಗೆ ಪಾಲುದಾರರಾಗಿದ್ದೇವೆ.

ನಮ್ಮ ಸಂಸ್ಥೆ ಯಾವುದೇ ಲಾಭಕ್ಕಾಗಿ ಮಡಿದ ಸಂಸ್ಥೆ ಅಲ್ಲ, ವ್ಯಕ್ತಿಗಳು, ಸಮಾಜ ಮತ್ತು ಸಂಸ್ಕೃತಿಯನ್ನು ಸಶಕ್ತಗೊಳಿಸಬೇಕು ಎಂದು ಮಾಡಿರುವ ಸಂಸ್ಥೆ. ಅಪಾರ ಉತ್ಸಾಹ ಮತ್ತು ದೂರದೃಷ್ಟಿಯ ಹೊಂದಿರುವ ನಮ್ಮ ಸಂಸ್ಥೆಯ ಸ್ಥಾಪಕರಾಗಿರುವ ಡಾ. ಸಿ ಎನ್ ಅಶ್ವತ್ನಾರಾಯಣ್ ಅವರ ಮಾರ್ಗದರ್ಶನದಲ್ಲಿ, ನಾವು ಸಕಾರಾತ್ಮಕ ಬದಲಾವಣೆ ಮತ್ತು ಅರ್ಥಪೂರ್ಣ ಕಾರ್ಯಗಳ್ಳಲ್ಲಿ ತೊಡಗಿರುತ್ತೇವೆ.

ಕ್ರಾಂತಿಕಾರಿ ಜನಸೇವಕರಾಗಿರುವ ನಮ್ಮ ಸಂಸ್ಥಾಪಕರ ಸಾಮರ್ಥ್ಯಕ್ಕೆ ದೂರದೃಷ್ಟಿಗೆ ಪೂರಕವಾಗಿ ನಮ್ಮ ಚಟುವಟಿಕೆಗಳನ್ನು ರೂಪಿಸಲಾಗಿದೆ.
2011 ರಲ್ಲಿ ಸ್ಥಾಪನೆಯಾದ ಡಾ. ಸಿ ಎನ್ ಅಶ್ವತ್ನಾರಾಯಣ್ ಪ್ರತಿಷ್ಠಾನವು ಯುವ ಸಬಲೀಕರಣ, ಆರೋಗ್ಯ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ ಮತ್ತು ಕ್ರೀಡೆ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ಉಂಟುಮಾಡಲು ಶ್ರಮಿಸುತ್ತಿದೆ.

ಡಾ. ಸಿ ಎನ್ ಅಶ್ವತ್ನಾರಾಯಣ್ ಫೌಂಡೇಶನ್ ನಮ್ಮ ದೇಶದ ಹಲವು ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಸಮಗ್ರ ವಿಧಾನವನ್ನು ಒದಗಿಸುವ ಚಿಂತನೆಯ ಮೂಲವಾಗಿದೆ. ಯುವ ಸಬಲೀಕರಣ, ಶಿಕ್ಷಣ, ಆರೋಗ್ಯ, ಕಲೆ ಮತ್ತು ಸಂಸ್ಕೃತಿ ಮತ್ತು ಕ್ರೀಡೆಗಳಂತಹ ವಿವಿಧ ಅಂಶಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಿ, ನಾವು ಭಾಗವಾಗಿರುವ ಸಮುದಾಯಗಳಲ್ಲಿ ಸುಸ್ಥಿರ ಬದಲಾವಣೆ ಮತ್ತು ಸಾಮಾಜಿಕವಾಗಿ ಅನುಕೂಲಕರ ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ರಚಿಸುವುದು ನಮ್ಮ ಗುರಿಯಾಗಿದೆ.