ಇದರ ಬಗ್ಗೆ ಇನ್ನಷ್ಟು ತಿಳಿಯಿರಿ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

ಉದ್ಯಮಶೀಲತೆ

 • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದ ಐ.ಟಿ.ಐ.ಗಳಲ್ಲಿ ಉಭಯ ತರಬೇತಿ ವ್ಯವಸ್ಥೆಯನ್ನು (Dual System of Training) ಅಳವಡಿಸಿ ೧೧ ಐ.ಟಿ.ಐ.ಗಳಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
 • ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ೧೪೪ ಮಿನಿ ಉದ್ಯೋಗ ಮೇಳಗಳನ್ನು ನಿರ್ವಹಿಸಲಾಗಿದ್ದು, ೧೧೪೫೧ ಅಭ್ಯರ್ಥಿಗಳಿಗೆ ಉದ್ಯೋಗ ಆಹ್ವಾನ ಪತ್ರಗಳನ್ನು ನೀಡಲಾಗಿರುತ್ತದೆ.
 • ರಾಜ್ಯದ ಎಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ “ಸ್ಟಡಿ ಸರ್ಕಲ್ಸ್ ಯೋಜನೆ” ಅಡಿಯಲ್ಲಿ ಆಯೋಜಿಸಲಾಗಿದ್ದ ೭೩ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮಗಳಲ್ಲಿ ಒಟ್ಟು ೩೭೬೮ ಅಭ್ಯರ್ಥಿಗಳು ತರಬೇತಿ ಪಡೆದಿರುತ್ತಾರೆ.
 • STRIVE (Skill Strengthening for Industrial Value Enhancement) (ಸ್ಟ್ರೈವ್‌) ಯೋಜನೆಯಡಿ ೧೯ ಸರ್ಕಾರಿ ಮತ್ತು ೦೧ ಖಾಸಗಿ ಅನುದಾನಿತ ಐಟಿಐ ಆಯ್ಕೆ ಮಾಡಿ ರೂ. ೨೯.೫೭ ಕೋಟಿಗಳ ಅನುದಾನದಲ್ಲಿ ಐಟಿಐ ಗಳ ಉನ್ನತೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ.
 • ಶಿಶಿಕ್ಷು ಯೋಜನೆಯಡಿಯಲ್ಲಿ ೨೦೧೯-೨೦ನೇ ಸಾಲಿನಲ್ಲಿ ೧೯೯೫೫ ಅಭ್ಯರ್ಥಿಗಳು ಶಿಶಿಕ್ಷು ತರಬೇತಿಯನ್ನು ಪಡೆದಿರುತ್ತಾರೆ.
 • ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ (CMKKY) ಅಲ್ಪಾವಧಿ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ಜುಲೈ ೨೬, ೨೦೧೯ ರಿಂದ ಈವರೆಗೆ ೩೦೩೪೫ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದು ೨೦೩೧೧ ಅಭ್ಯರ್ಥಿಗಳ ತರಬೇತಿ ಪೂರ್ಣಗೊಂಡಿದ್ದು ೫೩೪೦ ಅಭ್ಯರ್ಥಿಗಳಿಗೆ ಉದ್ಯೋಗ ನಿಯುಕ್ತಿಗೊಳಿಸಲಾಗಿದೆ.
 • ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ (PMKVY) ಅಡಿಯಲ್ಲಿ ಈವರೆಗೆ ೧೪೬೩೩ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದು ೫೭೯೧ ಅಭ್ಯರ್ಥಿಗಳ ತರಬೇತಿ ಪೂರ್ಣಗೊಂಡಿದ್ದು ೧೫೬೧ ಅಭ್ಯರ್ಥಿಗಳಿಗೆ ಉದ್ಯೋಗ ನಿಯುಕ್ತಿಗೊಳಿಸಲಾಗಿದೆ.
 • ರಾಜ್ಯದಲ್ಲಿ ೨,೭೯,೭೯೯ ಬಡ ಮಹಿಳೆಯರನ್ನು ಒಗ್ಗೂಡಿಸಿ ೨೧೫೨೩ ಸ್ವ-ಸಹಾಯ ಗುಂಪುಗಳನ್ನು ಎನ್‌ಆರ್‌ಎಲ್‌ಎಮ್ ಯೋಜನೆ ವ್ಯಾಪ್ತಿಗೆ ತರಲಾಗಿದೆ. ೧೪೭೪೫ ಸ್ವ-ಸಹಾಯ ಗುಂಪುಗಳಿಗೆ ರೂ. ೧೩೦೪೧.೭೫ ಕೋಟಿ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗಿದೆ.
 • ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ (ಡಿಡಿಯುಜಿಕೆವೈ) ೩೬೯೯ ಅಭ್ಯರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ಪ್ರಾರಂಭಿಸಿದ್ದು, ೩೩೩೬ ಅಭ್ಯರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ. ೪೮೯೩ ಅಭ್ಯರ್ಥಿಗಳು ವೇತನಾಧಾರಿತ ಉದ್ಯೋಗ ಪಡೆದಿರುತ್ತಾರೆ.
 • ೨೨೬೦ ಮಹಿಳೆಯರ ಸ್ವ-ಸಹಾಯ ಸಂಘಗಳನ್ನು ರಚಿಸಿ ೧೭೨೦ ಮಹಿಳೆಯರ ಸ್ವ-ಸಹಾಯ ಸಂಘಗಳಿಗೆ ರೂ.೧೦,೦೦೦/- ರಂತೆ ಹಾಗೂ ೬೭ ಪ್ರದೇಶ ಮಟ್ಟದ ಒಕ್ಕೂಟಗಳಿಗೆ ರೂ.೫೦,೦೦೦/- ರಂತೆ ಆವರ್ತಕ ನಿಧಿಯನ್ನು ನೀಡಲಾಗಿದೆ.
 • ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪ ಘಟಕದಡಿ ೬೭೯೨ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ.
 • ಸ್ವಯಂ ಉದ್ಯೋಗ ಕಾರ್ಯಕ್ರಮ ಉಪ ಘಟಕದಡಿಯಲ್ಲಿ ೧೧೯೪ ಫಲಾನುಭವಿಗಳಿಗೆ ವೈಯಕ್ತಿಕ ಹಾಗೂ ೧೦೫ ಗುಂಪು ಕಿರು ಉದ್ದಿಮೆ ಸ್ಥಾಪಿಸಲು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗಿದೆ. ೬೭೨ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್‌ಗಳ ಮೂಲಕ ಕ್ರೆಡಿಟ್ ಲಿಂಕೇಜ್‌ಗೆ ನೆರವು ನೀಡಿ ರೂ.೧೦೦೦೦೦/-ದ ಸಾಲ ಸೌಲಭ್ಯ ಒದಗಿಸಲಾಗಿದೆ.
 • ರಾಜ್ಯದ ೫ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಸತಿ ರಹಿತರಿಗೆ ಹೊಸ ಆಶ್ರಯ ಕಟ್ಟಡ ನಿರ್ಮಾಣ ಮಾಡಿ, ಪ್ರಸ್ತುತ ೫೯ ಆಶ್ರಯ ಕೇಂದ್ರಗಳ ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ೯೮೭ ನಗರ ವಸತಿ ರಹಿತರಿಗೆ ೪೫ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.
 • ಇಸ್ರೋ, ಹೆಚ್.ಎ.ಎಲ್. ಇತ್ಯಾದಿ ಪ್ರತಿಷ್ಠಿತ ಸಂಸ್ಥೆಗಳಿಗೆ ಉಪಗ್ರಹಗಳ, ಲಘು ಮತ್ತು ಸುಧಾರಿತ ಮಧ್ಯಮ ಯುದ್ಧ ವಿಮಾನಗಳ ಬಿಡಿಭಾಗಗಳನ್ನು ಉತ್ಪಾದಿಸಲು ಬೆಂಗಳೂರಿನ ಜಿಟಿಟಿಸಿ ಸೇವಾ ಕೇಂದ್ರದ ಸಾಮರ್ಥ್ಯವನ್ನು ರೂ.೨೦.೦೦ ಕೋಟಿಗಳ ವೆಚ್ಚದಲ್ಲಿ ಉನ್ನತೀಕರಿಸಲು ಕ್ರಮವಹಿಸಲಾಗುತ್ತಿದೆ.
 • ೨೦೧೯-೨೦ನೇ ಸಾಲಿನಲ್ಲಿ CMKKYಯೋಜನೆಯಡಿ ಒಟ್ಟು ೪೪೮೦ ಅಭ್ಯರ್ಥಿಗಳಿಗೆ ಅಲ್ಪಾವಧಿ ವೃತ್ತಿಪರ ಕೌಶಲ್ಯ ತರಬೇತಿ ಗುರಿಯ ಪೈಕಿ ೪೨೬೯ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ.
 • ಔಟ್‌ರೀಚ್ ಹಾಗೂ ಪ್ರೇರಣಾ ತರಬೇತಿ ಕಾರ್ಯಕ್ರಮಗಳನ್ನು ಒಟ್ಟು ೧೦೪೦೦ ಅಭ್ಯರ್ಥಿಗಳಿಗೆ, ಎರಡು/ಮೂರು ದಿನಗಳ ರೆಡಿ ಮತ್ತು ಸ್ಟಡಿ ಕಾರ್ಯಕ್ರಮಗಳನ್ನು ೮೪೪೩ ಅಭ್ಯರ್ಥಿಗಳಿಗೆ ನೀಡಲಾಗಿದೆ.
 • To enable the youth who are discharged from Balamandirs after 21 years of age financial assistance of Rs.5000 per month, up to a maximum of 3 years, will be provided under the “Upakara” scheme. Rs. 1 crore will be provided for this purpose during the year 2020-21.
 • Arrangement will be made in Belagavi and Kalaburagi Divisions through State Road Transport Corporations to provide Vehicle Driving Training to unemployed youth (male/female) of the Scheduled Castes and Scheduled Tribes.
 • Loan facility will be provided to the unemployed youth belonging to Scheduled Castes and Scheduled Tribes to purchase small goods transport vehicles.
 • Along with various paramedical certificate courses, skill development training will be provided to the unemployed youth belonging to Scheduled Castes and Scheduled Tribes by the Department of Health and Family Welfare in coordination with the Skill Development Department.
 • A revamped Talent Acceleration Programme would be initiated to upskill the students  guaranteeing placement for them in the job market; 1000 graduates will be trained in the next two years. A sum of Rs. 2 crore will be provided for this.
 • An amount of Rs.20 crore will be earmarked in 2020-21 for Chief Minister’s ‘Koushalya Karnataka’.
 • Under Public Private Partnership (PPP), Centers of Excellence will be established in Government Tool Room and Training Centre located at Belagavi, Hubli, Mangaluru, Shivamogga, Hassan, Tumkur and Harihara with an expenditure of Rs.353 crore. It is targeted to provide appointments to 12600 students in the next five years.
 • Dual System of Training will be implemented in the ITIs of the State. This programme will be implemented in association with the institutes and Micro, Small and Medium Enterprises.
 • The capacity of Service Centres in Government Tool Room and Training Centre, Bengaluru will be upgraded with an expenditure of Rs.20 crore for the manufacture of spare parts of Satellites, Light Combat Aircrafts (LCA) and Advanced Medium Combat Aircrafts (AMCA) required by prestigious institutions like ISRO, HAL.
 • To enable street vendors in urban areas to carry out business through mobile application and to enhance their professionalism and entrepreneurship, a software will be developed for the e-market system under the Deen Dayal Antyodaya Scheme – National Urban Livelihood Mission.
*Deputy CM was given the Skill Development ministry in February of this year.
 • Since early April, 1,147 self-help groups (SHG) operating under the State Rural Livelihood Organization – Sanjeevini have produced 13 lakh three-layer high quality masks and supplied them to the respective district administrations, local medical shops and NGOs at prices ranging from Rs. 10 to Rs. 22. Around Rs. 174.97 Crores worth of community financing loans have been provided to these groups till date.
 • Around 4,000 members of Sanjeevani led SHGs are serving as Corona warriors in the respective districts. They established community kitchens at 13 locations with the help of the district administration, to aid the poor and deprived during this period for which Rs. 6.81 Crores have been provided from the Relief Fund. 
 • In Udupi district, 38 women SHGs comprising 82 women are producing personal protective equipment (PPE) gowns while one self help group from Tumkur are doing the same.
 • Government Tool Room and Training Centres (GTTC) in Karnataka are in the process of manufacturing ‘Airflow Regulators’ an important component of ventilators needed to treat Covid-infected patients. The 15 liter capacity valve used for the treatment of small children costing Rs. 14000 and the 250 Liter capacity valve used for the treatment of adults costing Rs 20000 are being produced. Several Industrial Training Institutes and other colleges of the state are prepared to manufacture necessary equipment needed for treating the patients.