ಶಿಕ್ಷಣ

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ

ಉನ್ನತ ಶಿಕ್ಷಣ ಇಲಾಖೆ

  • UUCMS [Unified University & College Management System]: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶೈಕ್ಷಣಿಕ, ಆಡಳಿತ, ಪರೀಕ್ಷಾ ಇತ್ಯಾದಿ.. ಎಲ್ಲಾ ವಿಭಾಗಳನ್ನು ಸಂಪೂರ್ಣ ಗಣಕೀಕರಣಗೊಳಿಸಲು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ(UUCMS)ಯನ್ನು, ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಅಬಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
  • ಯುವ ಸಬಲೀಕರಣ ಕೇಂದ್ರಗಳು: ರಾಜ್ಯದ ಯುವಜನತೆಗೆ ಮಾಹಿತಿ, ತರಬೇತಿ ಮತ್ತು ಪ್ರೇರಣೆಗಳನ್ನು ನೀಡುವ ಮೂಲಕ ಅವರ ಆಯ್ಕೆಯ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹಾಗೂ ಉನ್ನತ ಶಿಕ್ಷಣಾವಕಾಶಗಳ ಕುರಿತು ಅರಿವು ಮೂಡಿಸಲು ಪ್ರತಿ ಜಿಲ್ಲೆಗೆ ಒಂದರಂತೆ, ಜಿಲ್ಲಾಕೇಂದ್ರಗಳಲ್ಲಿರುವ ೩೦ ಕಾಲೇಜುಗಳಲ್ಲಿ ಯುವ ಸಬಲೀಕರಣ ಕೇಂದ್ರವನ್ನು (Youth Empowerment Center) ಪ್ರಾರಂಭಿಸಲಾಗಿದೆ.
  • ಡಿಜಿಟಲ್ ಕಲಿಕೆ: ಡಿಜಿಟಲ್ ಕಲಿಕೆ ಯೋಜನೆಯಡಿ ಕಾಲೇಜುಗಳ ಬೋಧಕರು ಸಿದ್ಧಪಡಿಸುತ್ತಿರುವ ಪಿಪಿಟಿ, ವಿಡಿಯೋಗಳು,ಅಧ್ಯಯನ ಸಾಮಗ್ರಿ ಮತ್ತು ಅಸೈನ್‌ಮೆಂಟ್‌ಗಳನ್ನು ತಂತ್ರಜ್ಞಾನ ಸಹಯೋಗದ ಮುಖಾಂತರ, ಪಠ್ಯ ಪರಿಕಲ್ಪನೆಗಳಲ್ಲಿ ಸ್ಪಷ್ಟತೆ ಮೂಡಿಸಿ, ಗುಣಾತ್ಮಕ ಶೈಕ್ಷಣಿಕ ವ್ಯವಸ್ಥೆಯನ್ನು ಪರಿಕಲ್ಪಿಸಲು ಯೋಜಿಸಿದೆ. ೩.೫ ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನೆ ಪಡೆಯಲಿದ್ದಾರೆ.
  • ನೇಮಕಾತಿ: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವಿವಿದ ವಿಷಯಗಳಲ್ಲಿ, ೧೨೪೨ ಸಹಾಯಕ ಪ್ರಾದ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ೩೧೦ ಪ್ರಾಂಶುಪಾಲರ ನೇರ ಆಯ್ಕೆ ಮುಖಾಂತರ ಭರ್ತಿ ಮಾಡಲು ನಿಯಮಗಳನ್ನು ಅಂತಿಮಗೊಳಿಸಲಾಗಿದೆ.
  • ಮೈತ್ರಿ ಸಹಾಯವಾಣಿ ಪೋರ್ಟಲ್: ವಿದ್ಯಾರ್ಥಿಗಳ ಅಹವಾಲು/ದೂರು/ಸಮಸ್ಯೆಗಳನ್ನು ಪರಿಹರಿಸಿ, ಸಾಂತ್ವನ ಮತ್ತು ಸಹಾಯ ನೀಡಲು ಆನ್ ಲೈನ್ ಸಹಯವಾಣಿ ತೆರೆಯಲಾಗಿದೆ.
  • Get-CET-Go: ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳು ಆನ್ ಲೈನ್ ವ್ಯವಸ್ಥೆಯ ಮೂಲಕ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-೨೦೨೦ ಪರೀಕ್ಷೆಗೆ ನೊಂದಾಯಿಸಿಕೊAಡಿರುವ ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ( (Comprehensive Online platform to prepare for KCET 2020– Online video, synopsis and mock test ಹಾಗೂ Online 44 Mock Test for NEET 2020) Get-CET-Go ಶೀರ್ಷಿಕೆಯಲ್ಲಿ ಪಡೆಯಲು ಹಾಗೂ ಕಂಟೆಂಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಆನ್‌ಲೈನ್ ಪ್ಲಾಟ್ಫಾರಂ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಡಿಯಲ್ಲಿ ಸುಮಾರು ೨ ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.
  • ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಕಾಯಕಲ್ಪ: ಬೆಂಗಳೂರಿನ ಐತಿಹಾಸಿಕ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ (UVCE) ಪ್ರತ್ಯೇಕ ಸ್ವಾಯತ್ತ ನೀಡಿ, ಐಐಟಿ ಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರೂ.೧೦ ಕೋಟಿಗಳ ಅನುದಾನದಲ್ಲಿ ಯೋಜನೆ ರೂಪಿಸಿದೆ.
  • ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ: ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯವನ್ನು, ಬೆಂಗಳೂರು ನಗರ ವಿಶ್ವವಿದ್ಯಾಲಯವೆಂದು ಮರು ನಾಮಕರಣಗೊಳಿಸಲಾಗಿದ್ದು, ವಿಶ್ವವಿದ್ಯಾಲಯವನ್ನು ವಿಶ್ವದರ್ಜೆಗೇರಸಲು, ರೂ. ೧೫೦ ಕೋಟಿಗಳ ವೆಚ್ಚದಲ್ಲಿ ವಿನೂತನ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಉತ್ಕೃಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆ ಸಿದ್ದಪಡಿಸಲಾಗಿದೆ.

ರಾಯಚೂರಿನಲ್ಲಿ ಹೊಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ ಹಾಗೂ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜನ್ನು, ಏಕೀಕೃತ “ನೃಪತುಂಗ ವಿಶ್ವವಿದ್ಯಾಲಯ”ವಾಗಿ ಮೇಲ್ದರ್ಜೆಗೇರಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು, ಕುಲಸಚಿವರು (ಆಡಳಿತ) ಮತ್ತು ಲೆಕ್ಕಾದಿಕಾರಿಗಳ ಹುದ್ದೆಗಳ ಅರ್ಹತೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಉನ್ನತ ಶಿಕ್ಷಣದಲ್ಲಿ, ಜಾಗತಿಕ ಮಟ್ಟದ ಗುಣಾತ್ಮಕ ಬದಲಾವಣೆಗಳನ್ನು ತರಲು “ವಿಷನ್ ಗ್ರೂಪ್” ರಚಿಸಲಾಗಿದೆ

  • ಲ್ಯಾಪ್‌ಟಾಪ್: ೨೦೧೯-೨೦ ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವರ್ಗದ ಅರ್ಹ ೧೦೯೯೧೬ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ.
  • ಪರಿಷ್ಕೃತ ವೇತನ: ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ / ಅನುದಾನಿತ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕರಿಗೆ ೭ನೇ ಯುಜಿಸಿ/ಎಐಸಿಟಿಇ ವೇತನ ಶ್ರೇಣಿಯನ್ನು ಅಳವಡಿಸಿ ಪರಿಷ್ಕರಿಸಲಾಗಿದೆ.
  • ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆ (BASE): ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯನ್ನು ವಿಶ್ವವಿದ್ಯಾಲಯವನ್ನಾಗಿಸಲು ಆಧಿನಿಯಮ ಜಾರಿಗೊಳಿಸಲಾಗಿದೆ. ಈ ಸಂಸ್ಥೆಯನ್ನು ವಿಶ್ವ ದರ್ಜೆ ಗುಣಮಟ್ಟಕ್ಕೇರಿಸಲು, ರೂ. ೧೫೦.೦೦ ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಯೋಜನೆಯು ಅಂತಿಮ ಹಂತ ತಲುಪಿದ್ದು, ಉದ್ಘಾಟನೆಗೆ ಸಿದ್ದವಾಗುತ್ತಿದೆ.
  • ಆನ್‌ಲೈನ್‌ ಅಫಿಲಿಯೇಶನ್ ವ್ಯವಸ್ಥೆ: ರಾಜ್ಯದ ಎಲ್ಲ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಸಂಯೋಜನೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಆನ್‌ಲೈನ್‌ ಅಫಿಲಿಯೇಶನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ
  • ಜ್ಞಾನನಿಧಿ ಚಾನೆಲ್ ಮತ್ತು ಕೋವಿಡ್-೧೯ ನಂತರ ಕ್ರಮ: ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಗೆ ಸಿದ್ಧಪಡಿಸಲು ಒಟ್ಟು ೬೯,೦೦೦ ಆನ್‌ಲೈನ್ ತರಗತಿಗಳನ್ನು ನಡೆಸಲಾಗಿದೆ. ೧೨,೫೦೦ ವಿಡಿಯೋ ತರಗತಿಗಳನ್ನು ಜ್ಞಾನನಿಧಿ ಯೂ ಟ್ಯೂಬ್ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
  • ‘ವಿಜಯೀ ಭವ’: ವಿದ್ಯಾರ್ಥಿಗಳಿಗೆ ಉದ್ಯೋಗ/ಸ್ಫರ್ಧಾತ್ಮಕ ಪರೀಕ್ಷಾ ಮಾಹಿತಿ, ಉದ್ಯೋಗ ಸಂಬಂಧಿಯಾದ ಕೌಶಲ್ಯಗಳು, ಪ್ರೇರಣಾತ್ಮಕ ನುಡಿಗಳು, ಯಶಸ್ವೀ ವ್ಯಕ್ತಿಗಳೊಡನೆ ಸಂದರ್ಶನ ಇವೇ ಮೊದಲಾದ ಕಾರ್ಯಕ್ರಮಗಳನ್ನು ನಿರ್ಮಿಸಿ, ‘ವಿಜಯೀ ಭವ’ ಎಂಬ ಹೆಸರಿನ ಯೂ-ಟ್ಯೂಬ್ ಚಾನೆಲ್‌ಗೆ ಅಪ್ ಲೋಡ್ ಮಾಡಲಾಗುತ್ತಿದೆ.

ಜಿಯೋಸ್ಟೇಶಿಯಲ್ ಕೇಂದ್ರ: ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ತಲಾ ಐದು ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಜಿಯೋಸ್ಟೇಶಿಯಲ್ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ೨೩ ಸರ್ಕಾರಿ ಪಾಲಿಟೆಕ್‌ಗಳಲ್ಲಿ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳ ಹಾಸ್ಟಲ್ಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ಒದಗಿಸಲಾಗಿದೆ. ಸದರಿ ಸಾಲಿಗೆ ೦೫ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಎಸ್.ಸಿ.ಪಿ / ಟಿ.ಎಸ್.ಪಿ ಯಡಿ ರೂ. ೨೦.೮೯ ಕೋಟಿ ವೆಚ್ಚ ಭರಿಸಲಾಗಿದೆ. ಇಲಾಖೆಯ ಅಧೀನದ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿದ್ಯಾರ್ಥಿ ಶುಲ್ಕವನ್ನು ಇ-ಸ್ಕಾಲರ್ ಶಿಪ್ ಪೋರ್ಟಲ್ ಮೂಲಕ ೬೧೭೫ ವಿದ್ಯಾರ್ಥಿಗಳಿಗೆ ರೂ. ೨೬೭೪.೬೭ ಲಕ್ಷಗಳನ್ನು ವಿತರಿಸಲಾಗಿದೆ.

  • ಇಲಾಖೆಯು ಸುಮಾರು ೨೦ಕ್ಕಿಂತಲೂ ಅಧಿಕ ದೇಶಗಳೊಂದಿಗೆ ಒಡಂಬಡಿಕೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ ಬಹರೈನ್ ದೇಶದೊಂದಿಗೆ Fintech, AI, IoT & Cyber Security ಸಂಬಂಧಿಸಿದಂತೆ ವಿಷಯಗಳಿಗೆ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ೨೦೨೦ ದಾವೋಸ್‌ನಲ್ಲಿ ಒಡಂಬಡಿಕೆ ಮಾಡಿಕೊಂಡಿದೆ.
  • ಬೆಂಗಳೂರು ಟೆಕ್ ಸಮ್ಮಿಟ್-೨೦೧೯ ಯಶಸ್ವಿಯಾಗಿ ಆಯೋಜನೆಗೊಂಡಿರುತ್ತದೆ. ಈ ಸಮ್ಮೇಳನದಲ್ಲಿ ವಿಶ್ವದಾದ್ಯಂತ ೨೧ ದೇಶಗಳಿಂದ ಪ್ರತಿನಿಧಿಗಳು ಮತ್ತು ೨೬೨ಕ್ಕೂ ಹೆಚ್ಚು ಭಾಷಣಕಾರರು, ೨೪೮ ಪ್ರದರ್ಶನಕಾರರು ಹಾಗೂ ೧೫,೦೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಮೂರು ದಿನಗಳ ಸಮ್ಮೇಳನವು ಯಶಸ್ವಿಯಾಗಿ ಮುಕ್ತಾಯಗೊಂಡಿರುತ್ತದೆ.
  • ಕರ್ನಾಟಕ ನಾವೀನ್ಯತಾ ಪ್ರಾಧಿಕಾರ (Karnataka Innovation Authority Act) ಕಾಯ್ದೆಯನ್ನು ಹೊರಡಿಸಲಾಗಿದ್ದು, ಇದರಲ್ಲಿ ಹೊಸ ಉತ್ಪನ್ನಗಳನ್ನು ಸುಧಾರಿತ ಕಾನೂನಿನ ಚೌಕಟ್ಟಿನಲ್ಲಿ ಅನಾವರಣಗೊಳಿಸಲು ಅವಕಾಶವನ್ನು ಮಾಡಲಾಗಿದೆ.
  • ಬಯೋ-ಸ್ಟಾರ್ಟ್ಅಪ್ ಗಳಿಗಾಗಿ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್‌ ಕೌನ್ಸಿಲ್‌ ಸಹಕಾರದೊಂದಿಗೆ ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ವತಿಯಿಂದ ಸುಸ್ಥಿರ ಉದ್ಯಮಶೀಲತೆ ಹಾಗೂ ಉದ್ಯಮ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗಿದೆ.
  • ಇಎಸ್‌ಡಿಎಂ ವಿಷಯದಲ್ಲಿ ಸುಮಾರು ೧೧೯೦೦ ವಿದ್ಯಾರ್ಥಿಗಳು ತರಬೇತಿ ಹೊಂದಿದ್ದು, ಇವರ ಪೈಕಿ ಸುಮಾರು ೬೨೨ ಅಭ್ಯರ್ಥಿಗಳಿಗೆ ಉದ್ಯೋಗಕ್ಕಾಗಿ ಕರೆ ಪತ್ರ ದೊರಕಿರುತ್ತವೆ.
  • ಎಲಿವೇಟ್‌ಕರೆ-೨ (Elevate call-2) ಹಾಗೂ ಎಲಿವೇಟ್- ಉನ್ನತಿ  (Elevate Unnathi) ಗಳಿಗಾಗಿ ಸುಮಾರು ೮೯೫ ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳ ಪೈಕಿ ಎಲಿವೇಟ್‌ಕರೆ-೨ರಲ್ಲಿ ೯೩ ಹಾಗೂ ಎಲಿವೇಟ್- ಉನ್ನತಿಯಲ್ಲಿ ೨೦ ಸ್ಟಾರ್ಟ್ಅಪ್‌ಗಳು ವಿಜೇತವಾಗಿರುತ್ತವೆ. ಇದಕ್ಕಾಗಿ ಸುಮಾರು ರೂ.೨೬.೫ ಕೋಟಿಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ.
  • ಸ್ಟಾರ್ಟ್ಅಪ್ ನೀತಿಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು, ಇದರಲ್ಲಿ, ಹಲವಾರು ನವೋದ್ಯಮಿಗಳು ಅವಿಷ್ಕಾರಿ ಉತ್ಪನ್ನಗಳಿಗೆ ಪರಿಹಾರಗಳನ್ನು ಕಂಡು ಹಿಡಿದು ಅದರ ಉದ್ಯಮಕ್ಕೆ ಬೃಹತ್‌ಮೊತ್ತದ ನಿಧಿಯನ್ನು ಸಂಗ್ರಹಿಸಿ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿರುತ್ತದೆ ಹಾಗೂ ನೀತಿ ಆಯೋಗ(Niti Aayog) ಪ್ರಕಟಿಸಿರುವ  India Innovation Index ೨೦೧೯ ರಲ್ಲಿ ಕರ್ನಾಟಕ ರಾಜ್ಯಕ್ಕೆ #೧ ಸ್ಥಾನ ಘೋಷಿಸಲಾಗಿದೆ.
  • ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮಧ್ಯಸ್ಥಿಕೆಗಳಿಗಾಗಿ ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಗುರುತಿಸಲು ಸವಾಲಿನ ಉದ್ದೇಶಕ್ಕಾಗಿ ಕರ್ನಾಟಕ ಸ್ಟಾರ್ಟ್ಅಪ್‌ ಪೋರ್ಟಲ್‌ನಲ್ಲಿ ಕೋಂಬ್ಯಾಟ್ ಕೋವಿಡ್-೧೯ ಚಾಲೆಂಜ್‌ನ್ನು ಮಾರ್ಚ್೩೦,೨೦೨೦ರಲ್ಲಿ ಅನಾವರಣಗೊಳಿಸಲಾಯಿತು.
  • ಇಲಾಖೆಯ ವ್ಯಾಪ್ತಿಯಲ್ಲಿರುವ ಬೆಂಗಳೂರು ಬಯೋ ಇನ್ನೋವೇಷನ್‌ಕೇಂದ್ರದಲ್ಲಿ ಸಂಶೋಧನೆ ನಿರತರವಾಗಿರುವ ವಿವಿಧ ಸ್ಟಾರ್ಟ್ಅಪ್‌ಗಳು ಕೋವಿಡ್-೧೯ನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಸಲುವಾಗಿ ೬ ಸಾಧನಗಳನ್ನು ಸಂಶೋಧನೆ ಮಾಡಿರುತ್ತಾರೆ ಹಾಗೂ ದಿನಾಂಕ:೦೭.೦೭.೨೦೨೦ರಂದು ಮಾನ್ಯ ಉಪ ಮುಖ್ಯಮಂತ್ರಿಯವರು ಇದನ್ನು ಅನಾವರಣಗೊಳಿಸಿರುತ್ತಾರೆ.
  • ರಾಜ್ಯದಲ್ಲಿನ ಸ್ಟಾರ್ಟ್ಅಪ್‌ಗಳನ್ನು ಪ್ರೋತ್ಸಾಹಿಸಲು  Startup Vision Group ರಚಿಸಲಾಗಿದೆ.
  • ಕಿಯೋನಿಕ್ಸ್‌ ವತಿಯಿಂದ ಸುಮಾರು ೧೦,೦೦೦ ಉದ್ಯೋಗಾಕಾಂಕ್ಷಿಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗಾವಕಾಶವನ್ನು ಒದಗಿಸಲಾಗಿದ್ದು, ವಿವಿಧ ಸರ್ಕಾರಿ ಇಲಾಖೆಗಳಿಗೆ ಮತ್ತು ನಿಗಮ ಮಂಡಳಿಗಳಿಗೆ ಇವರನ್ನು ನಿಯೋಜಿಸಲಾಗಿದೆ.
  • ಕಿಯೋನಿಕ್ಸ್‌ನಿಂದ ಕರ್ನಾಟಕ ಸರ್ಕಾರದ ನೌಕರರು/ಅಧಿಕಾರಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಆನ್‌ಲೈನ್‌ಪರೀಕ್ಷೆ ನಡೆಸಿ ಡಿಜಿಟಲ್‌ಪ್ರಮಾಣ ಪತ್ರ ನೀಡಲಾಗುತ್ತಿದೆ.
  • ಕಿಯೋನಿಕ್ಸ್‌ನಿಂದ ಕರ್ನಾಟಕ ರಾಜ್ಯಾದ್ಯಂತ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಒಟ್ಟು ೧೮೪ ಗಣಕಯಂತ್ರ ತರಬೇತಿ ಕೇಂದ್ರಗಳ ಪ್ರಾಂಚೈಸಿ ಕೇಂದ್ರಗಳು ಮತ್ತು ಕಿಯೋನಿಕ್ಸ್‌ ತರಬೇತಿ ಕೇಂದ್ರಗಳು ಕಾರ್ಯರೂಪದಲ್ಲಿದ್ದು, ತರಬೇತಿಗೆ ಅವಶ್ಯವಿರುವ ಪರಿಣಿತ ತರಬೇತಿದಾರರು ಹಾಗೂ ಸುಸಜ್ಜಿತ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ. ಈ ಕೇಂದ್ರಗಳ ಮುಖಾಂತರ ವಿದ್ಯಾವಂತ ನಿರುದ್ಯೋಗಿ ಯುವಕ / ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಉಪಯುಕ್ತವಾಗುವ ವಿವಿಧ ಕೋರ್ಸ್‌ಗಳ ತರಬೇತಿ ನೀಡಲಾಗುತ್ತಿದೆ.
  • ಕಿಯೋನಿಕ್ಸ್‌ ವತಿಯಿಂದ ೨೫೦ ಏಜೆನ್ಸಿಗಳನ್ನು ಟೆಂಡರ್‌ಮೂಲಕ ಆಯ್ಕೆ ಮಾಡಲಾಗಿದ್ದು, ಅವರುಗಳಿಂದ ವಿದ್ಯುನ್ಮಾನ, ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
  • ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ಸಿಎ ನಿವೇಶನದಲ್ಲಿ Start-up ಮತ್ತು Incubation ಕೇಂದ್ರಗಳನ್ನು ಬೆಂಬಲಿಸಲು ರೂ.೩೨.೭೨ ಕೋಟಿ ವೆಚ್ಚದಲ್ಲಿ ೮೨,೦೦೦ ಚ.ಅಡಿ ವಿಸ್ತಿರ್ಣದ Plug and play ಮೂಲಭೂತ ಸೌಕರ್ಯ ಹೊಂದಿದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.
  • To bring transparency in the Higher Education Department and avoid issues of corruption in appointing credible candidates, the government has directed the relevant departments to make necessary amendments in service rules and implement the ‘no interview’ policy for recruitment in posts of Assistant Professors.
  • The State Government has announced the establishment of a Vision Group on Higher Education to effectively transform the higher education scenario in Karnataka.
  • The state government has initiated a programme for the transparent distribution of post matric scholarships in a fully paperless manner through an Integrated State Scholarship Portal. This is a path breaking initiative by the Government of Karnataka as the portal’s backbone is the use of blockchain technology which ensures 100% transparency in the grant of scholarships. 
  • An amount of Rs 5 crore allocated to Visvesvaraya Technological University to offer special courses for students to make them meet industry standards.
  • Visvesvaraya College of Engineering will be developed into an autonomous institute, based on the IIT model. Rs.10 crore is allotted for this purpose.
  • A permanent system will be put in place to efficiently monitor the administration of Universities and Colleges in the State with the help of technology, at a cost of Rs. 1 crore.
  • To enhance the net enrolment ratio in higher education, interactive online courses (M.O.O.C.) will be started and the requisite good quality e-content will be developed at a cost of Rs. 1 crore.
  • Geospatial technology centres will be established at cost of Rs. 5 crore each under Visvesvaraya Technological University and Department of Technical Education to enhance employment opportunities of polytechnic and engineering students.
  • An Asian nations Education Ministers’ Education Conclave and Mega Exhibition will be organized in Bengaluru under private partnership.
  • A task force committee has been constituted to monitor the situation related to annual examinations as well as other issues related to Covid-19 in the remaining academic calendar headed by the Karnataka State Higher Education Council (KSHEC) vice-chairman SV Ranganath.  The committee has suggested a one-time measure of automatically promoting all students except those in the final year, to the next semester.
  • On 20 April, the ministry launched a free online crash course termed “GetCETGo” which will greatly help all students of the state to prepare for the upcoming CET and NEET 2020 exams during national lockdown in absence of regular preparatory classes.
  • The state government is setting up Vivekananda youth empowerment centres in every school and college in the state to inculcate in students patriotic feeling and awareness on job opportunities. The centres will have experienced people to be in touch with the Youth Promotion Centres, one in every district.

Medical Health Care Centers

Together we can build a stronger economy, healthier families and a more

Economical Stability

Economical can build a stronger economy, healthier families and a more...

Prioritizing the most vulnerable

President announced plans to end solitary confinement for juvenile offenders...

Educational Environment

Education is the most powerful weapon which you can use to change...

Campaign is power

0

Total Volunteer

0

Campaigns

0

Vote Papers

0

Coverage Area